ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Sunday, 29 December 2013

ಸರ್ಕಲ್ ಮಾರಮ್ಮ ದೇವಾಲಯದಲ್ಲಿ ಅಗ್ನಿಹೋತ್ರ ಪ್ರಾತ್ಯಕ್ಷಿಕೆ












ಹಾಸನದ ವೇದಭಾರತಿಯು ಕಳೆದ ಒಂದು ವರ್ಷದಿಂದ ನಮ್ಮ ಪ್ರಾಚೀನ ಅಗ್ನಿಹೋತ್ರದ ಪರಿಚಯವನ್ನು ಸಾಮಾನ್ಯ ಜನರ ಮಧ್ಯೆ ಮಾಡುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಹಾಸನದಲ್ಲಿ ಶ್ರೀ ಸೀತಾರಾಮಾಂಜನೇಯ ದೇವಾಲಯದ ಸಭಾಂಗಣದಲ್ಲಿ ಈಗಾಗಲೇ ಎರಡು ಅಗ್ನಿಹೋತ್ರ ಕಾರ್ಯಕ್ರಮಗಳು ನಡೆದಿದ್ದು, ಕುವೆಂಪುನಗರದ ಅರಳಿಕಟ್ಟೆ ಜೀರ್ಣೋದ್ಧಾರ ಸಮಿತಿಯ ಆಶ್ರಯದಲ್ಲಿ ಅಗ್ನಿಹೋತ್ರ ನಡೆದಿದೆ. ಮತ್ತೊಂದು ವಿಶೇಷವೆಂದರೆ ಹಾಸನದ ಉಧ್ಯಮ ಒಂದಕ್ಕೆ ಜರ್ಮನಿ ದೇಶದಿಂದ ಬಂದಿದ್ದ ವಿದೇಶೀಯರೆದುರು ಅಗ್ನಿಹೋತ್ರ ನಡೆದಿದೆ. ಕಳೆದ ಕೆಲವು ದಿನಗಳಲ್ಲಿ ಹಂಪಾಪುರದ ಸುಭಾಷ್ ಚಾಇಟಬಲ್ ಟ್ರಸ್ಟ್ ಆಸ್ರಯದಲ್ಲಿ ಕೂಡ ಅಗ್ನಿಹೋತ್ರ ನಡೆದು ದಿನಾಂಕ 29.12.2013 ಭಾನುವಾರ ಬೆಂಗಳೂರಿನ ಮಲ್ಲೇಶ್ವರಮ್ ನಲ್ಲಿರುವ ಸರ್ಕಲ್ ಮಾರಮ್ಮ ದೇವಾಲಯದಲ್ಲಿ ಅಗ್ನಿಹೋತ್ರ ಪ್ರಾತ್ಯಕ್ಷಿಕೆ ನಡೆಯಿತು. ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಅಗ್ನಿಹೋತ್ರದ ವಿವರಣೆ ನೀಡಿ ಉಪನ್ಯಾಸ ಮಾಡಿದರು. ಅದರ ಆಡಿಯೋ ರೆಕಾರ್ಡಿಂಗ್ ಸರಿಯಾಗಿ ಆಗಿಲ್ಲವಾದರೂ ಮಾಹಿತಿಗಾಗಿ ಇಲ್ಲಿ   ಪ್ರಕಟಿಸಲಾಗುವುದು.
1.mp3http://www.mediafire.com/view/fdc8uoh4k645guq/Circle%20Maramma-1.mp3

http://www.mediafire.com/view/9dbs6xeo810tu3b/Circle%20Maramma-2.mp3

ವೇದ ವಿಜ್ಞಾನ ರಾಷ್ಟ್ರೀಯ ಸಮಾವೇಶದ ಕೆಲವು ದೃಶ್ಯಗಳು

ಕೆಲವು ಚಿತ್ರಗಳನ್ನು ನೋಡಿ ಕೊನೆಯಲ್ಲಿ ಬಾಬಾ ರಾಮದೇವ್ ಅವರ ಭಾಷಣವನ್ನು ಕೇಳಿ.






















http://www.mediafire.com/view/c1vz9uaxbiag02k/Ramdev.mp3

Wednesday, 25 December 2013

ಹಂಪಾಪುರದಲ್ಲಿ ಹಾಸನದ ವೇದಭಾರತೀ. . . .














ಸುಭಾಷ್.ಎಂ.ರಾವ್ ಟ್ರಸ್ಟ್ ವತಿಯಿಂದ  ನಡೇದ  ದಿ|| ಸುಭಾಷ್ ಸ್ಮರಣೆ ಕಾರ್ಯಕ್ರಮದ ಕೆಲವು ಚಿತ್ರಗಳು ಮತ್ತು ಎರಡು ವೀಡಿಯೋಗಳು ಇಲ್ಲಿವೆ. ಇನ್ನೂ ಪ್ರಮುಖವಾದ ಚಿತ್ರಗಳನ್ನು ಅಪ್ ಲೋಡ್ ಮಾಡಲಾಗುವುದು.
ಸುಭಾಷ್ ಸಂಸ್ಮರಣೆಯ ಆಡಿಯೋ ಕೆಳಗಿನ ಕೊಂಡಿಯಲ್ಲಿದೆ ಗೀತಗಂಗಾ

Thursday, 5 December 2013

ಹೆಸರು ಸೂಚಿಸುತ್ತೀರಾ?



ಇಂದಿನ ದಿನಗಳಲ್ಲಿ ಬಿ.ಪಿ. ಅಥವಾ ಸಕ್ಕರೆಖಾಯಿಲೆ ಇಲ್ಲದ ಜನರನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕಾಗಿದೆ. ಸಾಮಾನ್ಯವಾಗಿ ತಲೆಗೆ ಸ್ವಲ್ಪ ಕೆಲಸ ಕೊಡುವವರಿಗಂತೂ ಇವೆರಡರಲ್ಲಿ ಒಂದಾದರೂ ಕಟ್ಟಿಟ್ಟಬುತ್ತಿ. ಆದರೆ ಇದರೊಟ್ಟಿಗೆ ಬದುಕುವುದನ್ನು ಜನರು ಅಭ್ಯಾಮಾಡಿ ಕೊಂಡುಬಿಟ್ಟಿದ್ದಾರೆ. ಬೆಳಗಿನ ತಿಂಡಿಯಾದ ಕೂಡಲೇ ಒಂದು ಮಾತ್ರೆ ನುಂಗಿದರಾಯ್ತು."ಇದು ಏನು ಮಹಾ ಬಿಡಿ".ಇದು ಸಹಜವಾದ ಪ್ರತಿಕ್ರಿಯೆ. ನಮ್ಮ ಆರೋಗ್ಯವನ್ನು ಆ ಮಾತ್ರೆಯ ನಿಯಂತ್ರಣಕ್ಕೆ ಕೊಟ್ಟಿರುವುದು ನಮಗೆ ಏನೂ ಅನ್ನಿಸುವುದಿಲ್ಲ. ನಮ್ಮ ಬಗ್ಗೆ ಅದೆಷ್ಟು ತಾತ್ಸಾರಮಾಡುತ್ತೇವೆ ನಾವು? ಆದರೆ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಲ್ಲದ ಚರ್ಚೆ ಮಾಡುತ್ತೇವೆ. ಸಮಯ ಅಪವ್ಯಯ ಮಾಡುತ್ತೇವೆ. ನಾನು ಕೆಲವು ಸಾಮಾಜಿಕ ತಾಣಗಳಲ್ಲಿ ಗಮನಿಸಿದ್ದೇನೆ. ಯಾವುದೋ ನನ್ನ ಜೀವನ ಅನುಭವವನ್ನು ಹಂಚಿಕೊಂಡಾಗ ಅದಕ್ಕೆ ಸಿಕ್ಕಿರುವಷ್ಟು ಪ್ರೋತ್ಸಾಹವು ವೇದದ ಬಗ್ಗೆ ಅಧ್ಯಯನ ಮಾಡಿ ಬರೆದ ಲೇಖನಕ್ಕೆ ಸಿಕ್ಕಿಲ್ಲ. ಕಾರಣ ವೇದದ ಹೆಸರು ಕೇಳಿದೊಡನೆ "ಇದು ಜೀವನದ ಅಂತಿಮ ಕಾಲಕ್ಕೆ ಬೇಕಾದ ವಿಷಯ" ಎಂಬುದು ಹಲವರ ಮನದಲ್ಲಿ ಅಚ್ಚೊತ್ತಿದೆ. ಆದರೆ ವೇದವೆಂದರೆ ಕೇವಲ ಪೂಜೆಯ ಮಂತ್ರಗಳೇ? ಖಂಡಿತಾ ಅಲ್ಲ. ನಿಜವಾಗಿ ಆರೋಗ್ಯವಂತ ಬದುಕಿಗಾಗಿ ಅದೆಷ್ಟು ಮಾರ್ಗದರ್ಶನ ಅದರಲ್ಲಿ ಲಭ್ಯವಿದೆ, ಎಂಬುದು ಅದರಲ್ಲಿ ಆಳಕ್ಕೆ ಇಳಿದಾಗ ಗೋಚರವಾಗುತ್ತದೆ. ಸಂಸ್ಕೃತ ಬಾರದ , ಶಾಸ್ತ್ರೋಕ್ತ ವಾಗಿ ವೇದಾಧ್ಯಯನ ಮಾಡದ ನನಗೇ ವೇದಮಂತ್ರಗಳು ಇಷ್ಟು ಪರಿಣಾಮ ಬೀರಿರಬೇಕಾದರೆ ಸಂಸ್ಕೃತ ಮತ್ತು ವೇದಾಧ್ಯನ ಆಗಿದ್ದವರಿಗಂತೂ ಅದೆಷ್ಟು ಮುದನೀಡಿರಬಹುದು! ಅದು ಏನೇ ಇರಲಿ. ನಾನಂತೂ ನಿರ್ಧಾರಮಾಡಿದ್ದಾಗಿದೆ. ನನಗೆ ತಿಳಿದ ವೇದ ಮಂತ್ರಗಳ ಸಾರವನ್ನು ಯಾವುದು ನೆಮ್ಮದಿಯ ಬದುಕಿಗೆ ಮಾರ್ಗದರ್ಶಕವಾಗಿದೆಯೋ ಅವುಗಳನ್ನು ಜನರಲ್ಲಿ ಹಂಚಿಕೊಳ್ಳಲು ಹಿಂಜರಿಯುವುದಿಲ್ಲ. ತಪ್ಪಾದರೆ ತಿದ್ದಲು ಪಂಡಿತರು ಗಳಿಲ್ಲವೇ? ನಮ್ಮಂತವರನ್ನು ತಿದ್ದುವುದು ಪಂಡಿತರ ಕರ್ತವ್ಯ. ಅವರು ಮಾಡಬೇಕಾದ ಕೆಲಸಕ್ಕೆ ನಮ್ಮಂತ ಸಾಮಾನ್ಯರು ಕೈ ಹಾಕಿರುವಾಗ ದೋಷ ಕಂಡರೆ ಪಂಡಿತರು ತಿದ್ದುತ್ತಾರೆಂಬ ಬರವಸೆಯಿಂದ ಒಂದು ಮಹತ್ವದ ಕೆಲಸಕ್ಕೆ ಕೈ ಹಾಕಿದ್ದೇನೆ.

ಬರುವ ಜನವರಿ ಮೊದಲವಾರದಿಂದ ಸ್ಥಳೀಯ ಪತ್ರಿಕೆಯಲ್ಲಿ ವೇದವನ್ನು ಆಧರಿಸಿ ಸಾಮಾಜಿಕ ಚಿಂತನೆಗೆ ಪ್ರೇರೇಪಿಸುವ ಲೇಖನ ಮಾಲೆ ಆರಂಭಿಸುವ ಇಚ್ಚೆ ಇದೆ. ಅದಕ್ಕೊಂದು 
----------------------------------------------------------------
ನಾನು ಈ ಪ್ರಶ್ನೆಯನ್ನು ಫೇಸ್ ಬುಕ್ ಓದುಗರಿಗೆ ಕೇಳಿದಾಗ ಕೆಲವು ಹೆಸರುಗಳನ್ನು ಸೂಚಿಸಿದ್ದಾರೆ.ನೀವೂ ಕೆಲವು ಹೆಸರು ಸೂಚಿಸಿ.ಅಂತಿಮವಾಗಿ ಒಂದನ್ನು ಆರಿಸಿಕೊಳ್ಲೋಣ.

Tuesday, 3 December 2013

ಮುತ್ತುಸ್ವಾಮಿ ದೀಕ್ಷಿತರ ರಚನೆಗಳ ಬಗ್ಗೆ ಡಾ || ಸತ್ಯವತೀ

ವೇದೋಕ್ತ ಜೀವನ ಶಿಬಿರ-2

ಶಿಬಿರದ ಬಗ್ಗೆ:

ನಿತ್ಯ ಸತ್ಯ ಸಂಸ್ಕೃತಿ ವಿಚಾರಗಳ ಅರಿವಿನಲ್ಲಿ ವ್ಯವಹರಿಸುವುದಕ್ಕೆ ಒತ್ತಡ ರಹಿತ ಸುಲಭ ಸೂತ್ರಗಳ ಪರಿಚಯ.    ವಿಮರ್ಶೆ ಮಾಡಿ  ಸತ್ಯ, ಸತ್ವ ಕಂಡರೆ ಮಾತ್ರ ಸ್ವೀಕರಿಸಿ.ಪುರುಷ-ಮಹಿಳೆಯರು ಎಂಬ ಭೇದವಿಲ್ಲ, ವಯಸ್ಸಿನ ಮಿತಿಯಿಲ್ಲ. ವೇದ ಮಂತ್ರಗಳು ತಿಳಿದಿರಬೇಕೆಂದಿಲ್ಲ. ಕಟುವಾದ ನಿಯಮಗಳಾವುದೂ ಇಲ್ಲ.ಕಾರ್ಯಕ್ರಮದ ಸ್ಥಳದಲ್ಲಿ ವೇದ ಸಾಹಿತ್ಯ ಕೃತಿಗಳ ಮಾರಾಟ ವ್ಯವಸ್ಥೆ ಇರುತ್ತದೆ.ವೇದದ ಬಗ್ಗೆ ಸಾಮಾನ್ಯ ಅರಿವು ಮತ್ತು ಆಸಕ್ತಿ ಇರುವ ೫೦ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ಸರಳವಾದ ಊಟೋಪಚಾರದ ವ್ಯವಸ್ಥೆ ಇರುತ್ತದೆ.

ಅರ್ಜಿ ಪಡೆಯಲು ಕೆಳಗಿನ ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಿ:
   
9980813162/9448033813/9448868537
ಇ-ಮೇಲ್: vedasudhe@gmail.com

ಅಂಚೆ ವಿಳಾಸ:
ವ್ಯವಸ್ಥಾಪಕರು
ವೇದಭಾರತೀ ಸಂಪ್ರತಿಷ್ಠಾನ
ಶಾಖೆ, ಚನ್ನರಾಯಪಟ್ಟಣ

------------------------------------------------------
ಪ್ರವೇಶ ಅರ್ಜಿ


ವೇದಭಾರತಿ ಸಂಪ್ರತಿಷ್ಠಾನ
ಜಾಗೃತಿ ಟ್ರಸ್ಟ್ ಕಾರ್ಯಾಲಯ
ಕೋಟೆ, ಚನ್ನರಾಯಪಟ್ಟಣ- 573116

ವೇದೋಕ್ತ ಜೀವನ ಪಥದ
ಶಿಬಿರ

ಮಾನ್ಯರೇ,
ಮುಂಬರುವ ೨೦೧೪ನೇ ಏಪ್ರಿಲ್ ತಿಂಗಳಲ್ಲಿ ಕೈಗೊಂಡಿರುವ ಜೀವನ ಪೋಷಕ ಆದರ್ಶಗಳನ್ನೊಳಗೊಂಡಿರುವ ಕಾರ್ಯಕ್ರಮದ ಧ್ಯೇಯೊದ್ದೇಶಗಳನ್ನು ನಾನು ಮನಸಾರೆ ಒಪ್ಪಿ ಈ ಮೂಲಕ ಸತ್ಯ ಜೀವನ ನಡೆಸಲು ಅದರ ಅರ್ಥ ಮತ್ತು ಉದ್ದೇಶವನ್ನು ಪಡೆಯಲಿಚ್ಚಿಸುತ್ತೇನೆ.  ತಾವು ನನ್ನನ್ನು ಶಿಬಿರಾರ್ಥಿಯಾಗಿ ಸ್ವೀಕರಿಸಬೇಕೆಂದು ಪ್ರಾರ್ಥನೆ.

ಶಿಬಿರ ಶುಲ್ಕ ವಿವರ:

ಪಾವತಿಸಿರುವ ಬ್ಯಾಂಕ್ ಶಾಖೆಯ ಹೆಸರು,ಊರು------------

ಚಲನ್ ನಂಬರ್:----------------

ದಿನಾಂಕ:-------------


ನನ್ನ ವಿಳಾಸ: ದೂರವಾಣಿ ಸಂಖ್ಯೆ:
_________________ ಸ್ಥಿರ : ________________
_________________ ಸಂಚಾರಿ:
_________________

ಸಹಿ/-
-------------------------------------------------------------------------------------------

ವೇದೋಕ್ತ ಜೀವನ ಶಿಬಿರದ ಬಗ್ಗೆ ಇನ್ನೊಂದಿಷ್ಟು ಮಾಹಿತಿ

1.  ಶಿಬಿರ ಶುಲ್ಕ ರೂ 500.00 [ಶಿಬಿರದಿಂದ ಶಿಬಿರಾರ್ಥಿಗಳು ಹಿಂದಿರುಗುವಾಗ ಹಿಂದಿರುಗಿಸಲಾಗುವುದೆಂದು ವ್ಯವಸ್ಥಾಪಕರು ತಿಳಿಸಿದ್ದಾರೆ]
2. ಶಿಬಿರಶುಲ್ಕ ಪಾವತಿಸಲು ಕೆನರಾ ಬ್ಯಾಂಕ್  ಉಳಿತಾಯ ಖಾತೆಯ ನಂಬರ್ ಪ್ರಕಟಿಸಲಾಗುವುದು.
3. ಶಿಬಿರಶುಲ್ಕವನ್ನು ಬ್ಯಾಂಕ್ ಖಾತೆಗೆ ಪಾವತಿಸಿ ವಿವರವನ್ನು  ನಮೂದಿಸಿರುವ ಅರ್ಜಿಯನ್ನು ತುಂಬಿ " ವೇದಭಾರತಿ ಸಂಪ್ರತಿಷ್ಠಾನ" ಜಾಗೃತಿ ಟ್ರಸ್ಟ್ ಕಾರ್ಯಾಲಯ, ಕೋಟೆ, ಚನ್ನರಾಯಪಟ್ಟಣ- 573116-ಈ ವಿಳಾಸಕ್ಕೆ ಕಳುಹಿಸಲು ಕೋರಿದೆ.
4. ಕಾಲಕಾಲಕ್ಕೆ ಅವಶ್ಯ ಮಾಹಿತಿಗಳನ್ನು ಪ್ರಕಟಿಸಲಾಗುವುದು.