ಆತ್ಮೀಯ ವೇದಾಭಿಮಾನಿಗಳಲ್ಲಿ ನಮಸ್ಕಾರಗಳು.
ಕಳೆದ ಆಗಸ್ಟ್ 19 ರಂದು ಆರಂಭವಾದ "ಎಲ್ಲರಿಗಾಗಿ ಸಾಪ್ತಾಹಿಕ ವೇದ ಪಾಠವು" ಯಶಸ್ವಿಯಾಗಿ ನಡೆಯುತ್ತಿದ್ದು ಪ್ರತ್ಯಕ್ಷವಾಗಿ ಸುಮಾರು 40 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದರೆ, ವೆಬ್ ಸೈಟ್ ಮೂಲಕ ಹಲವರು ಮತ್ತು ಸುಮಾರು 40 ವಿದ್ಯಾರ್ಥಿಗಳು ಈ ಮೇಲ್ ಮೂಲಕ ಪಾಠವನ್ನು ತರಿಸಿಕೊಂಡು ಅಭ್ಯಾಸ ಮಾಡುತ್ತಿದ್ದಾರೆ. ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಮತ್ತು ಚನ್ನರಾಯಪಟ್ಟಣದ ವೇದಾಧ್ಯಾಯೀ ಶ್ರೀ ಪ್ರಸಾದ್ ಅವರು ಪಾಠವನ್ನು ಮಾಡುತ್ತಿದ್ದಾರೆ. ಇದುವರೆವಿಗೆ ...
1. ವಿಶ್ವಾನಿ ದೇವ [ ಯಜು.30.3 ] ಪಾಠ ಆಗಿದೆ
2. ಪ್ರಣೋದೇವೀ....[ಋಗ್...ಸರಸ್ವತೀ ಸೂಕ್ತದ ಆಯ್ದ ಭಾಗ] ಪಾಠ ಆಗಿದೆ
3. ಶ್ರೀ ಗಣೇಶ ಸೂಕ್ತಮ್ [ಋಗ್. ಮಂಡಲ-8 ಅಷ್ಟಕ-6 ಸೂಕ್ತ-81] .......ಈಗ ನಡೆಯುತ್ತಿದೆ.
ವೇದ ಪಾಠವನ್ನು ಸರಿಯಾಗಿ ಕಲಿಯಲು ವಾರಕ್ಕೊಂದು ಗಂಟೆ ಏನೇನೂ ಸಾಲದು. ಆದರೆ ವೇದಮಂತ್ರಗಳ ಜೊತೆಗೇ ವೇದದಲ್ಲಿರುವ ಅನೇಕ ಮಂತ್ರಗಳ ಬಗ್ಗೆ ಆಗಿಂದಾಗ್ಗೆ ಉಪನ್ಯಾಸಗಳನ್ನು ಯೋಜಿಸುವುದರಿಂದ ಸ್ವಲ್ಪ ಮಟ್ಟಿಗಾದರೂ ವೇದದ ಅರಿವು ಮೂಡುವುದರಲ್ಲಿ ಸಂದೇಹವಿಲ್ಲ.
ಇದುವರಗೆ ಕಲಿತಿರುವ ಮಂತ್ರಗಳನ್ನು ಉಚ್ಚರಿಸುವಾಗ ಆಗುವ ಸ್ವರದಲ್ಲಿನ ದೋಷಗಳನ್ನು ತಿದ್ದಿ ಸಾಮೂಹಿಕವಾಗಿ ಅಭ್ಯಾಸ ಮಾಡಲು ನಾವೆಲ್ಲಾ ವೇದ ವಿದ್ಯಾರ್ಥಿಗಳು ಒಂದು ಭಾನುವಾರ 5-6 ಗಂಟೆಗಳ ಕಾಲ ಒಟ್ಟಿಗೆ ಸೇರಬೇಕೆಂಬ ಸಲಹೆಯು ಹಲವರಿಂದ ಬಂದಿದೆ. ದಿನಾಂಕ 11.11.2012 ಭಾನುವಾರ ಅಥವಾ ಎಲ್ಲರಿಗೂ ಅನುಕೂಲ ವಾಗುವ ಒಂದು ದಿನ ಹಾಸನದ ಈಶಾವಾಸ್ಯಮ್ ನಲ್ಲಿ ಅಥವಾ ರಾಮನಾಥಪುರ ದಂತಹ ನದೀ ತೀರದಲ್ಲಿ 5-6 ಗಂಟೆಗಳ ಕಾಲ ಒಟ್ಟಿಗೆ ಅಭ್ಯಾಸ ಮಾಡಿದರೆ ಮಂತ್ರ ಪಾಠವನ್ನು ಮುಂದುವರೆಸಿಕೊಂಡು ಹೋಗಲು ಸುಲಭವಾಗುತ್ತದೆ,. ಎಂಬ ಅಭಿಪ್ರಾಯವಿದೆ. ನವಂಬರ್ ನಲ್ಲಾದರೆ ದಿನಾಂಕ 11 ಅಥವಾ 18 , ಡಿಸೆಂಬರ್ ನಲ್ಲಿ ಯಾವುದೇ ಭಾನುವಾರವೂ ಆಗಬಹುದು. ನಿಮ್ಮ ಸಲಹೆಯನ್ನು vedasudhe@gmail.com ಗೆ ಮೇಲ್ ಮಾಡಿ. ಹೆಚ್ಚು ಜನರಿಗೆ ಅನುಕೂಲ ವಾಗುವ ಸ್ಥಳ /ದಿನವನ್ನು ಅಂತಿಮವಾಗಿ ನಿರ್ಧರಿಸೋಣ.ಈ ಮೇಲ್ ನಲ್ಲಿ ಪಾಠವನ್ನು ತರಿಸಿಕೊಳ್ಳುತ್ತಿರುವವರು ಹೀಗಾದರೂ ವರ್ಷಕ್ಕೊಮ್ಮೆ ಅಥವಾ ಎರಡು ಭಾರಿ ಪ್ರತ್ಯಕ್ಷ ಪಾಠದಲ್ಲಿ ಪಾಲ್ಗೊಳ್ಳುವುದು ಸೂಕ್ತವಲ್ಲವೇ?
ಈ ಮೇಲ್ ನಲ್ಲಿ ಯಾರಿಗೆ ಪಾಠ ತಲುಪಿಲ್ಲ ಅವರು ಮೇಲ್ ಮಾಡಿದರೆ ಪಾಠವನ್ನು ಕಳಿಸಿಕೊಡಲಾಗುತ್ತದೆ. ಪಾಠ ತರಿಸಿಕೊಂಡವರು ಕಲಿಯಿಯುತ್ತಿದ್ದೀರಿ, ತಾನೇ?
ಗಣೇಶ ಸೂಕ್ತಮ್ ಮಂತ್ರ ಪಾಠ ಮುಗಿದ ಮೇಲೆ ಶ್ರೀ ವಿಶ್ವನಾಥ ಶರ್ಮರು ಅರ್ಥವನ್ನು ತಿಳಿಸುವರು.
ನಮಸ್ಕಾರಗಳೊದನೆ
-ಹರಿಹರಪುರ ಶ್ರೀಧರ್
ಸಂಪಾದಕ, ವೇದಸುಧೆ/ವೇದ ಭಾರತೀ
ಮನವಿ: ಶ್ರೀ ವಿಶ್ವನಾಥ ಕಿಣಿಯವರು ಡಿಸೆಂಬರ್: 23 ಸೂಕ್ತವೆಂದುತಿಳಿಸಿದ್ದಾರೆ ಉಳಿದವರ ಅಭಿಪ್ರಾಯವನ್ನು ತಿಳಿಸಿ vedasudhe@gmail.com ಗೆ ಮೇಲ್ ಮಾಡಬಹುದು. ಅಥವಾ ಮೊಬೈಲ್ ಸಂಖ್ಯೆ 9663572406 ಗೆ ಕರೆಮಾಡಬಹುದು
----------------------------------------------------------------------------
Dear Sir:
I am visiting Bangalore from Canada and have been greatly impressed by what you are doing to promote the vedic traditon. I have been trying to reach/contact sri Sudhakara Sharma and even called Sri Shankara TV to get his contact number in Bangalore. Could you please help me to contact him before I leave for Canada on Nov 16.
Your help will be greatly appreciated
With best wishes
Dr. G. Lakshman
ಕೆನಡಾದಲ್ಲಿರುವ ಡಾ.ಲಕ್ಷ್ಮಣ್ ರವರು ಈಗ ಬೆಂಗಳೂರಿಗೆ ಬಂದಿದ್ದು ಅವರ ದೂರವಾಣಿ ಮೂಲಕ ಮಾತನಾಡಿ ವೇದಸುಧೆ/ವೇದಭಾರತಿಯ ಕಾರ್ಯವನ್ನು ಮುಕ್ತಕಂಠದಿಂದ ಮೆಚ್ಚಿದರು. ನಮ್ಮ ಶ್ರಮ ಸಾರ್ಥಕವಲ್ಲವೇ? ಹೊರದೇಶದಲ್ಲಿರುವ ಕನ್ನಡಿಗರಿಗಾಗಿ ಹೊರದೇಶದಲ್ಲಿರುವವರ ಸಹಕಾರದೊಡನೆ ಆನ್ ಲೈನ್ ವೇದ ಮಾಠವನ್ನು ಮಾಡುವ ಯೋಜನೆ ವೇದಭಾರತಿಗೆ ಇದೆ. ಇಂದು ಮನದಲ್ಲಿ ಮೂಡಿದ್ದು ನಾಳೆ ಕಾರ್ಯಗತವಾಗುವುದರಲ್ಲಿ ಸಂಶಯವಿಲ್ಲ. ಇದು ನನ್ನ ಅನುಭವ.
-ಹರಿಹರಪುರಶ್ರೀಧರ್
ಸಂಪಾದಕ
ವೇದಭಾರತೀ/ ವೇದಸುಧೆ