|
ಹಾಸನ ವೇದಭಾರತಿಯು ನಡೆಸುವ ನಿತ್ಯ ಸತ್ಸಂಗ |
|
ಹುಬ್ಬಳ್ಳಿಯ ಪೂಜ್ಯ ಸ್ವಾಮಿ ಚಿದ್ರೂಪಾನಂದರ ಕನಸು-ಸಾವಿರ ದಂಪತಿಗಳಿಂದ ಸಾಮೂಹಿಕ ಅಗ್ನಿಹೋತ್ರ ಬೃಹತ್ ಕಾರ್ಯಕ್ರಮ |
: ಹಾಸನದ ವೇದಭಾರತಿಯು ನಡೆಸುವ ದೈನಂದಿನ ಅಗ್ನಿಹೋತ್ರವನ್ನು ವೀಕ್ಷಿಸಿದ ಹುಬ್ಬಳ್ಳಿಯ ಆರ್ಷವಿದ್ಯಾಲಯದ ಪೂಜ್ಯ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರಿಗೆ ಸಾವಿರಾರು ಜನರಿಂದ ಸಾಮಾಹಿಕ ಅಗ್ನಿಹೋತ್ರ ಮಾಡಿಸಬೇಕೆಂಬ ಮಹಾನ್ ಇಚ್ಛೆ. ಬರುವ ಮಾರ್ಚ್ ನಲ್ಲಿ ಅಂತಾದ್ದೊಂದು ಬೃಹತ್ ಕಾರ್ಯಕ್ರಮವು ವೇದಭಾರತಿಯ ಸಂಚಾಲಕತ್ವದಲ್ಲಿ ಹುಬ್ಬಳ್ಳಿಯ ಸಮೀಪ ನಡೆಯಲಿದೆ. ಹಾಸನದ ವೇದ ಭಾರತಿಯು ಅನುಸರಿಸುತ್ತಿರುವ ಅಗ್ನಿಹೋತ್ರ ಮಂತ್ರವು ಈಶ್ವರಸ್ತುತಿ ಮಂತ್ರ ಸಹಿತವಾಗಿ ಇಲ್ಲಿ ನೀಡಿರುವ ಕೊಂಡಿಯಲ್ಲಿ ಲಭಿಸುವುದು. ಇಂತಾ ಒಂದು ಬೃಹತ್ ಅಪರೂಪದ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪಾಲ್ಗೊಳ್ಳುವ ಸದವಕಾಶವಿದೆ. ಈ ಮಂತ್ರವನ್ನು ಆಡಿಯೋ ಕೇಳಿ ಅಭ್ಯಾಸ ಮಾಡಲೂ ಬಹುದು. ಅಗ್ನಿಹೋತ್ರ ಮಾಡುವುದು ಬಲು ಸುಲಭ . ತನಗೆ ಅಗ್ನಿಹೋತ್ರ ದ ಪರಿಚಯವಿಲ್ಲವೆಂದು ಯಾರೂ ಸಂಕೋಚ ಪಡಬೇಕಾಗಿಲ್ಲ. ಸರಳವಾದ ಈ ಕ್ರಿಯೆಯನ್ನು ಕಾರ್ಯಕ್ರಮದ ದಿನದಂದೇ ಕಲಿತುಕೊಳ್ಳಲು ಸಾಧ್ಯ. ಈಗ ಇಲ್ಲಿರುವ ಕೊಂಡಿಯಿಂದ ಮಂತ್ರವನ್ನು ಅಭ್ಯಾಸ ಮಾಡಿದರೆ ಅಂದು ಎಲ್ಲರೂ ಸಾಮಾಹಿಕವಾಗಿ ಹೇಳಲು ಸಾಧ್ಯವಿದೆ. ಪ್ರಯತ್ನ ಪಡಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವೇದಭಾರತಿಯ ಸಂಚಾಲಕರನ್ನು vedasudhe@gmali.com ಮೂಲಕ ಅಥವಾ ಮೊಬೈಲ್ ನಂಬರ್ 9663572406 ಮೂಲಕ ಸಂಪರ್ಕಿಸಬಹುದು.
ಮಂತ್ರದ ಡೌನ್ ಲೋಡ್ ಗಾಗಿ ಕೊಂಡಿ
http://www.divshare.com/download/26086812-18b" height="426" src="https://scontent-b-dfw.xx.fbcdn.net/hphotos-xpf1/v/t1.0-9/10687078_337665919734841_705836925885351718_n.jpg?oh=b3f6ced5f85ccd2c9af0929334570b14&oe=548F1871" style="margin-left: auto; margin-right: auto;" width="640" />
|
ಹಾಸನದ ವೇದಭಾರತಿಯ ಸದಸ್ಯರು ಪಠಿಸುವ ಈಶ್ವರಸ್ತುತಿ ಮತ್ತು ಅಗ್ನಿಹೋತ್ರ ಮಂತ್ರವನ್ನು ಇಲ್ಲಿ ಕೇಳಬಹುದು. ಹೊಸಬರು ಕಲಿಯಲು ಅನುವಾಗುವಂತೆ ಇನ್ನೆರಡು-ಮೂರು ದಿನಗಳಲ್ಲಿ ಆಡಿಯೋಕ್ಲಿಪ್ ಅಳವಡಿಸಲಾಗುವುದು.
No comments:
Post a Comment