ಅಂತರ್ಜಾಲದ ಮೂಲಕ ವೇದ ಕಲಿಯಲು ಅನುಕೂಲ ವಾಗುವಂತೆ ವೇದಸುಧೆ ವೆಬ್ ಸೈಟ್ ನಲ್ಲಿ ವೇದ ಪಾಠದ ಆಡಿಯೋ ಅಳವಡಿಸಲಾಗುತ್ತಿದೆ. ಪ್ರತ್ಯಕ್ಷ ತರಗತಿಯಲ್ಲಿ ಗುರುಗಳು ನಮಗೆ ಕಲಿಸಿದ್ದನ್ನು ಕಲಿಯಲು ಅನುಕೂಲವಾಗುವಂತೆ ಎಡಿಟ್ ಮಾಡಿ ಅಳವಡಿಸಲಾಗುತ್ತಿದೆ. ಈ ಹಿಂದಿನ ಆಡಿಯೋ ಹಾಕಿದಾಗ ಅದರಿಂದ ಕಲಿಯಲು ತೊಡಕಾಗಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ ಅದನ್ನು ಕೇಳಿದವರಾರೂ ಹೇಳಲಿಲ್ಲ. ನಾವು ವೇದವನ್ನು ಕಲಿಯುವಾಗ ಆಗುವ ತೊಂದರೆ ತಿಳಿಸಿದರೆ ಅದನ್ನು ಸರಿಪಡಿಸಲು ಅನುಕೂಲವಾಗುತ್ತದೆ. ಹಿಂದಿನ ಆಡಿಯೋ ದಿಂದ ಹೆಚ್ಚು ಅನುಕೂಲವಾಗಿಲ್ಲವೆಂದು ನನ್ನ ಅನಿಸಿಕೆ ಅದಕ್ಕಾಗಿ ಇಲ್ಲಿ ಮತ್ತೊಂದು ಆಡಿಯೋ ಅಳವಡಿಸಲಾಗಿದೆ .
ಗಣೇಶ ಸೂಕ್ತದಲ್ಲಿ ಎಲ್ಲೆಲ್ಲಿ ಸ್ವರಗಳಿಗೆ ಒತ್ತು ಕೊಟ್ಟು ಕಲಿಯಬೇಕೋ ಅಲ್ಲೆಲ್ಲಾ ನಮ್ಮ ಗುರುಗಳು ಬಹಳ ಗಮನ ವಿಟ್ಟು ಹೇಳಿಕೊಟ್ಟಿದ್ದಾರೆ. ನಾವು ಅನುಸರಿಸಲು ಅನುಕೂಲವಾಗುವಂತೆ ಅವರು ಹೇಳಿಕೊಟ್ಟಿದ್ದನ್ನು ಅವರ ಕಂಠದಿಂದಲೇ ಮತ್ತೊಮ್ಮೆ ಹಾಕಲಾಗಿದೆ. ಎರಡ ನೆಯ ಭಾರಿ ಗುರುಗಳು ಹೇಳುವಾಗ ಅವರಜೊತೆಗೆ ನಾವು ಹೇಳಿದರೆ ಸ್ವರವನ್ನು ಸರಿಪಡಿಸಿಕೊಳ್ಳಲು ಅನುಕೂಲವಾಗುತ್ತದೆ.
ಗುರುಗಳ ಎದಿರು ಕುಳಿತು ವೇದಮಂತ್ರವನ್ನು ಕಲಿಯುವುದಕ್ಕೂ ಅಂತರ್ಜಾಲದಲ್ಲಿ ಕಲಿಯುವುದಕ್ಕೂ ಬಹಳ ವೆತ್ಯಾಸವಿದೆ. ಆದರೂ ಪ್ರತ್ಯಕ್ಷ ಅನುಭವಕ್ಕೆ ಹತ್ತಿರವಾಗಿರುವಂತೆ ಆಡಿಯೋ ತಯಾರಿಸಲಾಗಿದೆ. ಇದರ ಸಾದಕಬಾದಕಗಳನ್ನು ದಯಮಾಡಿ ತಿಳಿಸಿ, ಅದರಿಂದ ಸರಿಪಡಿಕೊಂಡು ಇನ್ನೂ ಉತ್ತಮವಾಗಿ ಆಡಿಯೋ ಹಾಕಲು ಅನುಕೂಲವಾಗುತ್ತದೆ.
ಮಂತ್ರವನ್ನೇನೋ ಕಲಿಯುವುದು ಅಷ್ಟು ಕಷ್ಟವಾಗಲಾರದು. ಆದರೂ ಸ್ವರಸಹಿತ ಕಲಿಯುವಾಗ ಬಹಳ ಪ್ರಯತ್ನವನ್ನಂತೂ ಹಾಕಲೇ ಬೇಕಾಗುತ್ತದೆ. ಅದರಿಂದ ಪಾಠವು ನಿಧಾನವಾದಂತೆ ಭಾಸವಾಗುತ್ತದೆ. ಆದರೆ ಒಮ್ಮೆ ಸ್ವರವನ್ನು ಸರಿಯಾಗಿ ಕಲಿತರೆ ಮುಂದೆ ನಮ್ಮ ವೇದ ಪಾಠವು ವೇಗ ಪಡೆದುಕೊಳ್ಳ ಬಹುದು.
Sunil Kelkar
ReplyDelete13:18 (45 minutes ago)
to me
Respected Sir,
Pls. do not stop sending vedapatha.
Since I have mapped my personal mail box [snkelkar1@gmail.com] with my office mail id , a copy of everything coming to my gmail is forwarded as a copy to my official mail id. There attachments like mp3,mp4,bmp,etc are removed.
I do get info from gmail account. Hence pls do not stop sending info.
Thanks & Regards,
Sunil Kelkar