ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Thursday, 5 December 2013

ಹೆಸರು ಸೂಚಿಸುತ್ತೀರಾ?



ಇಂದಿನ ದಿನಗಳಲ್ಲಿ ಬಿ.ಪಿ. ಅಥವಾ ಸಕ್ಕರೆಖಾಯಿಲೆ ಇಲ್ಲದ ಜನರನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕಾಗಿದೆ. ಸಾಮಾನ್ಯವಾಗಿ ತಲೆಗೆ ಸ್ವಲ್ಪ ಕೆಲಸ ಕೊಡುವವರಿಗಂತೂ ಇವೆರಡರಲ್ಲಿ ಒಂದಾದರೂ ಕಟ್ಟಿಟ್ಟಬುತ್ತಿ. ಆದರೆ ಇದರೊಟ್ಟಿಗೆ ಬದುಕುವುದನ್ನು ಜನರು ಅಭ್ಯಾಮಾಡಿ ಕೊಂಡುಬಿಟ್ಟಿದ್ದಾರೆ. ಬೆಳಗಿನ ತಿಂಡಿಯಾದ ಕೂಡಲೇ ಒಂದು ಮಾತ್ರೆ ನುಂಗಿದರಾಯ್ತು."ಇದು ಏನು ಮಹಾ ಬಿಡಿ".ಇದು ಸಹಜವಾದ ಪ್ರತಿಕ್ರಿಯೆ. ನಮ್ಮ ಆರೋಗ್ಯವನ್ನು ಆ ಮಾತ್ರೆಯ ನಿಯಂತ್ರಣಕ್ಕೆ ಕೊಟ್ಟಿರುವುದು ನಮಗೆ ಏನೂ ಅನ್ನಿಸುವುದಿಲ್ಲ. ನಮ್ಮ ಬಗ್ಗೆ ಅದೆಷ್ಟು ತಾತ್ಸಾರಮಾಡುತ್ತೇವೆ ನಾವು? ಆದರೆ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಲ್ಲದ ಚರ್ಚೆ ಮಾಡುತ್ತೇವೆ. ಸಮಯ ಅಪವ್ಯಯ ಮಾಡುತ್ತೇವೆ. ನಾನು ಕೆಲವು ಸಾಮಾಜಿಕ ತಾಣಗಳಲ್ಲಿ ಗಮನಿಸಿದ್ದೇನೆ. ಯಾವುದೋ ನನ್ನ ಜೀವನ ಅನುಭವವನ್ನು ಹಂಚಿಕೊಂಡಾಗ ಅದಕ್ಕೆ ಸಿಕ್ಕಿರುವಷ್ಟು ಪ್ರೋತ್ಸಾಹವು ವೇದದ ಬಗ್ಗೆ ಅಧ್ಯಯನ ಮಾಡಿ ಬರೆದ ಲೇಖನಕ್ಕೆ ಸಿಕ್ಕಿಲ್ಲ. ಕಾರಣ ವೇದದ ಹೆಸರು ಕೇಳಿದೊಡನೆ "ಇದು ಜೀವನದ ಅಂತಿಮ ಕಾಲಕ್ಕೆ ಬೇಕಾದ ವಿಷಯ" ಎಂಬುದು ಹಲವರ ಮನದಲ್ಲಿ ಅಚ್ಚೊತ್ತಿದೆ. ಆದರೆ ವೇದವೆಂದರೆ ಕೇವಲ ಪೂಜೆಯ ಮಂತ್ರಗಳೇ? ಖಂಡಿತಾ ಅಲ್ಲ. ನಿಜವಾಗಿ ಆರೋಗ್ಯವಂತ ಬದುಕಿಗಾಗಿ ಅದೆಷ್ಟು ಮಾರ್ಗದರ್ಶನ ಅದರಲ್ಲಿ ಲಭ್ಯವಿದೆ, ಎಂಬುದು ಅದರಲ್ಲಿ ಆಳಕ್ಕೆ ಇಳಿದಾಗ ಗೋಚರವಾಗುತ್ತದೆ. ಸಂಸ್ಕೃತ ಬಾರದ , ಶಾಸ್ತ್ರೋಕ್ತ ವಾಗಿ ವೇದಾಧ್ಯಯನ ಮಾಡದ ನನಗೇ ವೇದಮಂತ್ರಗಳು ಇಷ್ಟು ಪರಿಣಾಮ ಬೀರಿರಬೇಕಾದರೆ ಸಂಸ್ಕೃತ ಮತ್ತು ವೇದಾಧ್ಯನ ಆಗಿದ್ದವರಿಗಂತೂ ಅದೆಷ್ಟು ಮುದನೀಡಿರಬಹುದು! ಅದು ಏನೇ ಇರಲಿ. ನಾನಂತೂ ನಿರ್ಧಾರಮಾಡಿದ್ದಾಗಿದೆ. ನನಗೆ ತಿಳಿದ ವೇದ ಮಂತ್ರಗಳ ಸಾರವನ್ನು ಯಾವುದು ನೆಮ್ಮದಿಯ ಬದುಕಿಗೆ ಮಾರ್ಗದರ್ಶಕವಾಗಿದೆಯೋ ಅವುಗಳನ್ನು ಜನರಲ್ಲಿ ಹಂಚಿಕೊಳ್ಳಲು ಹಿಂಜರಿಯುವುದಿಲ್ಲ. ತಪ್ಪಾದರೆ ತಿದ್ದಲು ಪಂಡಿತರು ಗಳಿಲ್ಲವೇ? ನಮ್ಮಂತವರನ್ನು ತಿದ್ದುವುದು ಪಂಡಿತರ ಕರ್ತವ್ಯ. ಅವರು ಮಾಡಬೇಕಾದ ಕೆಲಸಕ್ಕೆ ನಮ್ಮಂತ ಸಾಮಾನ್ಯರು ಕೈ ಹಾಕಿರುವಾಗ ದೋಷ ಕಂಡರೆ ಪಂಡಿತರು ತಿದ್ದುತ್ತಾರೆಂಬ ಬರವಸೆಯಿಂದ ಒಂದು ಮಹತ್ವದ ಕೆಲಸಕ್ಕೆ ಕೈ ಹಾಕಿದ್ದೇನೆ.

ಬರುವ ಜನವರಿ ಮೊದಲವಾರದಿಂದ ಸ್ಥಳೀಯ ಪತ್ರಿಕೆಯಲ್ಲಿ ವೇದವನ್ನು ಆಧರಿಸಿ ಸಾಮಾಜಿಕ ಚಿಂತನೆಗೆ ಪ್ರೇರೇಪಿಸುವ ಲೇಖನ ಮಾಲೆ ಆರಂಭಿಸುವ ಇಚ್ಚೆ ಇದೆ. ಅದಕ್ಕೊಂದು 
----------------------------------------------------------------
ನಾನು ಈ ಪ್ರಶ್ನೆಯನ್ನು ಫೇಸ್ ಬುಕ್ ಓದುಗರಿಗೆ ಕೇಳಿದಾಗ ಕೆಲವು ಹೆಸರುಗಳನ್ನು ಸೂಚಿಸಿದ್ದಾರೆ.ನೀವೂ ಕೆಲವು ಹೆಸರು ಸೂಚಿಸಿ.ಅಂತಿಮವಾಗಿ ಒಂದನ್ನು ಆರಿಸಿಕೊಳ್ಲೋಣ.

1 comment:

  1. ಸುರಭಿ,
    ಸಮಷ್ಠಿ,
    ಆಧ್ಯ,
    ವೇದಲತೆ,
    ಮನೋಜ್ಞ,
    ಸುಬೋಧ..

    ReplyDelete