ಹಾಸನದ ವೇದಭಾರತಿಯು ಕಳೆದ ಒಂದು ವರ್ಷದಿಂದ ನಮ್ಮ ಪ್ರಾಚೀನ ಅಗ್ನಿಹೋತ್ರದ ಪರಿಚಯವನ್ನು ಸಾಮಾನ್ಯ ಜನರ ಮಧ್ಯೆ ಮಾಡುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಹಾಸನದಲ್ಲಿ ಶ್ರೀ ಸೀತಾರಾಮಾಂಜನೇಯ ದೇವಾಲಯದ ಸಭಾಂಗಣದಲ್ಲಿ ಈಗಾಗಲೇ ಎರಡು ಅಗ್ನಿಹೋತ್ರ ಕಾರ್ಯಕ್ರಮಗಳು ನಡೆದಿದ್ದು, ಕುವೆಂಪುನಗರದ ಅರಳಿಕಟ್ಟೆ ಜೀರ್ಣೋದ್ಧಾರ ಸಮಿತಿಯ ಆಶ್ರಯದಲ್ಲಿ ಅಗ್ನಿಹೋತ್ರ ನಡೆದಿದೆ. ಮತ್ತೊಂದು ವಿಶೇಷವೆಂದರೆ ಹಾಸನದ ಉಧ್ಯಮ ಒಂದಕ್ಕೆ ಜರ್ಮನಿ ದೇಶದಿಂದ ಬಂದಿದ್ದ ವಿದೇಶೀಯರೆದುರು ಅಗ್ನಿಹೋತ್ರ ನಡೆದಿದೆ. ಕಳೆದ ಕೆಲವು ದಿನಗಳಲ್ಲಿ ಹಂಪಾಪುರದ ಸುಭಾಷ್ ಚಾಇಟಬಲ್ ಟ್ರಸ್ಟ್ ಆಸ್ರಯದಲ್ಲಿ ಕೂಡ ಅಗ್ನಿಹೋತ್ರ ನಡೆದು ದಿನಾಂಕ 29.12.2013 ಭಾನುವಾರ ಬೆಂಗಳೂರಿನ ಮಲ್ಲೇಶ್ವರಮ್ ನಲ್ಲಿರುವ ಸರ್ಕಲ್ ಮಾರಮ್ಮ ದೇವಾಲಯದಲ್ಲಿ ಅಗ್ನಿಹೋತ್ರ ಪ್ರಾತ್ಯಕ್ಷಿಕೆ ನಡೆಯಿತು. ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಅಗ್ನಿಹೋತ್ರದ ವಿವರಣೆ ನೀಡಿ ಉಪನ್ಯಾಸ ಮಾಡಿದರು. ಅದರ ಆಡಿಯೋ ರೆಕಾರ್ಡಿಂಗ್ ಸರಿಯಾಗಿ ಆಗಿಲ್ಲವಾದರೂ ಮಾಹಿತಿಗಾಗಿ ಇಲ್ಲಿ ಪ್ರಕಟಿಸಲಾಗುವುದು.
http://www.mediafire.com/view/9dbs6xeo810tu3b/Circle%20Maramma-2.mp3
No comments:
Post a Comment